EKAVI and Kannada Software Development

ella kannadaabhimanigala antarrashtriya vedike in

Dr. Lingadevaru Halemane on Kannada Tantramsha in 2009

Posted by egovindia on August 19, 2009

———- Forwarded message ———-
From: V. M. Kumaraswamy <ekavikumaraswamy@gmail.com>
Date: 2009/6/21
Subject: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕನ್ನಡ ತಂತ್ರಾಂಶದ-ಸ್ಥಿತಿ ಗತಿ
ಜೂನ್ ೭,  ೨೦೦೯, ಬಾನುವಾರ
 
ನಮಸ್ಕಾರ,
 
ಬಾನುವಾರ ಸಂಜೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕನ್ನಡ ತಂತ್ರಾಂಶದ-ಸ್ಥಿತಿ ಗತಿ ಕುರಿತ ವರದಿ
 
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪ್ರೊ.ಲಿಂಗದೇವರು ಹಳೆಮನೆ,
ತಾಂತ್ರಿಕ ಯುಗದಲ್ಲಿ ನಾವು ಇಂದು ಬದುಕುತ್ತಿದ್ದೇವೆ ಕಾಲದಿಂದ ಕಾಲಕ್ಕೆ ಜ್ಞಾನದ ಶಾಖೆ ಹರಡುತ್ತಾ ಹೊಸ ಹೊಸ ವಿಷಯಗಳನ್ನು ಕಲಿಯುತ್ತಹೋಗುತ್ತಿದ್ದೇವೆ. ಇತ್ತೀಚಿಗೆ ತಂತ್ರಜ್ಞಾನ ನಮ್ಮ ಬದುಕಿನ ಮತ್ತು ಭಾಷೆಯ ಅಬಿಭಾಜ್ಯ ಅಂಗವಾಗಿ ಉಳಿದಿದೆ. ಒಂದು ಭಾಷೆ ಕಾಲದಿಂದ ಕಾಲಕ್ಕೆ ಅಭಿವೃದ್ದಿ ಹೊಂದುತ್ತಿದೆ. ಇವತ್ತು ಕನ್ನಡ ತಂತ್ರಾಂಶವನ್ನು ದಿನನಿತ್ಯದ ಕೆಲಸವಾಗಿ ಬಳಸಿಕೊಳ್ಳುತ್ತಿದ್ದೇವೆ, ತಂತ್ರಾಂಶ ಬಳಕೆ ದೊಡ್ಡದು ಇಂದು ಅಂತರ್ಜಾಲದ ಮುಖೇನ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳ ಬಹುದಾಗಿದೆ.
ಬಳಕೆ ಯಾಗುತ್ತಿರುವ ಇತರೆ ಭಾಷೆಯ ತಂತ್ರಾಂಶ ಗಳಂತೆಯೇ ಸಂಸ್ಕಾರ ಭಾಷೆ ಏನು ಹೇಳುತ್ತವೆಯೋ ಅದಕ್ಕೂ ಇದು ಆಗಬೇಕು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಚ್ಚು ಇಂಗ್ಲಿಷ್ ಭಾಷೆಯ ಬಳಕೆಯಾಗುತ್ತಿದೆ ಆದರೆ ಕೆಲವು ರಾಷ್ಟ್ರಗಳಲ್ಲಿ ತಮ್ಮದೇ ಭಾಷೆಯನ್ನೂ ಅಳವಡಿಕೆ ಮಾಡಿಕೊಂಡಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಇಂದು ತಂತ್ರಾಂಶ ಲಭ್ಯವಾಗಲಿದೆ ಅದಕ್ಕೆ ನಾವು ಪ್ರಯತ್ನ, ಒತ್ತಡ, ಸೌಲಭ್ಯಗಳ ಬಗ್ಗೆ ಮಾತನಾಡಬೇಕಾಗಿದೆ.
ನಾನು ಒಬ್ಬ ಭಾಷಾವಿಜ್ಞಾನಿ ಮಾತ್ರ, ಇದರ ಸಹಕಾರ ತಂತ್ರಜ್ಞರು ಪಡೆದುಕೊಳ್ಳಬೇಕು.
ಇಂತಹ ತಂತ್ರಾಂಶವನ್ನು ಕನ್ನಡದಲ್ಲಿ ಬಳಕೆಯಾಗುತ್ತಿದ್ದು ಹಲವಾರು ಲೋಪ ದೋಷಗಳ ಬಗ್ಗೆ ಎಲ್ಲಾ ಕನ್ನಡ ಅಭಿಮಾನಿಗಳ ಅಂತರ ರಾಷ್ಟ್ರೀಯ ವೇದಿಕೆ(ಈ-ಕವಿ)ಯ ವಿ.ಎಂ.ಕುಮಾರಸ್ವಾಮಿ ಅವರು ಇದರ ಬಗ್ಗೆ ದನಿ ಎತ್ತಿ ಇಂತಹ ಕಾರ್ಯ ಕ್ರಮವನ್ನು ಆಯೋಜಿಸಿದೆ.
ಇದೆಲ್ಲ ಆರಂಭ ವಾಗಿದ್ದು ೫ ವರುಷಗಳ ಹಿಂದೆ ದಿವಂಗತ ಪೂರ್ಣಚಂದ್ರ ತೇಜಸ್ವಿಯವರ ಜೊತೆ ತಾವು ಸಂವಾದ ಮಾಡುತ್ತಾ ದಾಸ್ ತಂತ್ರಾಂಶದ ಮುಖೇನ ತಮ್ಮ ಕೃತಿಯನ್ನು ಸಂಗ್ರಹಿಸಿಟ್ಟಿದ್ದರು, ನಂತರ ವಿಂಡೋಸ್ ೯೫  ತಂತ್ರಾಂಶ ಬಂದಾಗ ಹೊಸದಾಗಿ ನವಿಕರಿಸಲು ಸಾಧ್ಯವಾಗಿರಲಿಲ್ಲ. ಆ ಒಂದು ಸಂಧರ್ಭದಲ್ಲಿ ಯುನಿಕೋಡ್, ಸ್ಪೆಲ್ ಕೋಡ್, ಸಮಸ್ಯೆಗಳು ಬಂದವು ಅದನ್ನು ಸಾರ್ವಜನಿಕರ ಮೂಲಕ ಒತ್ತಡ ಏರುವ ಮುಖೇನ ತರುವ ಪ್ರಯತ್ನ ಪೂರ್ಣಚಂದ್ರ ತೇಜಸ್ವಿ ಮಾಡಿದರು.

ನಮ್ಮ ಅಕ್ಷರಕ್ಕೆ ನಮ್ಮದೇ ಆದ ಸೌಂದರ್ಯ ಪ್ರಜ್ಞೆ ಇರುತ್ತದೆ, ಬೇರೆ ರೀತಿಯ ಫಾಂಟ್ ಗಳು ಬಂದವು ಆದರೆ ಕೆಲವು ಭಾಷಾ ಜ್ಞಾನಿಗಳ ಸಹಕಾರ ತೆಗೆದು ಕೊಂಡಿರಲಿಲ್ಲ ಎಂದು ಅವರು ತಿಳಿಸಿದರು.
 
ಇವತ್ತಿನ ಸ್ಥಿತಿಗತಿ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಮುಂದುವರೆಸುತ್ತ ಅವರು ತಂತ್ರಾಂಶವನ್ನು ಸೂಕ್ಷ್ಮ ಸಂವೇದನಾಶೀಲ ವ್ಯಕ್ತಿ ಇದನ್ನ ಅರ್ಥ ಮಾಡಿಕೊಳ್ಳಬಲ್ಲದೇ ಹೊರತು ನಮಗ್ಯಾರಿಗೂ ಅರ್ಥವಾಗುವುದಿಲ್ಲ. ಯುನಿಕೋಡ್ ನ ಸಮಸ್ಯೆ ಇಂದು ಪ್ರಬಲವಾಗಿದೆ ಇದು ಅರ್ಥವೇ ಆಗಿರುವುದಿಲ್ಲ, ಇದರ ಸಮಸ್ಯೆ ಹಿಂದೆ ಲಾಜಿಕ್ ಇದೆ, ಪ್ರತಿಯೊಂದು ಸಂಸ್ಥೆಯು ದುಡ್ಡು ಮಾಡುವುದೇ ಉದ್ದೇಶವಾಗಿರುತ್ತದೆ. ಹೊಸ ಹೊಸ ಸಾಫ್ಟ್ ವೇರ್ ಗಳು ಮಾರುಕಟ್ಟೆಗೆ ಬಂದಾಗ ನಾವು ಅಳವಡಿಸಿಕೊಳ್ಳ ಬೇಕಾದ ಅನಿವಾರ್ಯ ಇರುತ್ತದೆ.  ಬೇರೆ ಬೇರೆ ಭಾಷೆಗಳ ಸಾಫ್ಟವೇರ್ ಬಂದಾಗ ನಾವು ಅಳವಡಿಸಿಕೊಳ್ಳುತ್ತಾಲಿರುತ್ತೇವೆ, ಆದರೆ ನಮ್ಮ ದೇಶೀಯ ಭಾಷೆಗಳ ಸಾಫ್ಟ್ ವೇರ್ ಗಳನ್ನೂ ಅಭಿವೃದ್ದಿ ಪಡಿಸಬೇಕಾಗಿದೆ.

ಕ.ಗ.ಪ ಮತ್ತು ಖಾಸಗಿ ಸಂಸ್ಥೆಗಳ ನಡುವೆ ಶೀತಲ ಸಮರ ನಡೆಸುತ್ತಿತ್ತು ಕನ್ನಡ ತಂತ್ರಾಂಶಕ್ಕೆ ಕರ್ನಾಟಕ ಸರ್ಕಾರ ೩೨ ಲಕ್ಷ ರುಪಾಯಿಗಳನ್ನು ಕೊಟ್ಟು ಅಭಿವೃದ್ದಿ ಪಡಿಸಲು ನೆರವಾಗಿತ್ತು ಅದರಲ್ಲಿ ೨೮ ಲಕ್ಷ ರೂಪಾಯಿಗಳನ್ನು ಅದನ್ನು ವ್ಯಯ ಮಾಡಲಾಗಿತ್ತು.

ಕನ್ನಡ ತಂತ್ರಾಂಶವನ್ನು ಅಭಿವೃದ್ದಿ ಪಡಿಸುವ ಸಲುವಾಗಿ ನಾವು ಒಂದು ಸಭೆಯನ್ನು ಕರೆಯಲಾಗಿತ್ತು ಅಂದು ನಡೆದ ಸಭೆಯಲ್ಲಿ ಅಂದುಕೊಳ್ಳದ ಮತ್ತು ಉಹಿಸಿಕೊಳ್ಳದ ಮಾಹಿತಿ ಅಲ್ಲಿ ದೊರಕಿದವು. ಇದರ ಬಗ್ಗೆ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ವಿಷಯವನ್ನು ಬಹಿರಂಗ ಪಡಿಸಿದೆವು ಮತ್ತು ಇದರ ಬಗ್ಗೆ ಗಮನ ಹರಿಸಲು ಸರ್ಕಾರಕ್ಕೆ ಒತ್ತಡ ತಂದೆವು ಆದರೆ ಏನು ಪ್ರಯೋಜನ ವಾಗಲಿಲ್ಲ.

ಕ.ಗ.ಪ. ಕನ್ನಡ ತಂತಂಶವನ್ನು ಓಪನ್ ಸೋರ್ಸ್ಗೆ  ಇಡಿ ಅದನ್ನು ಅಭಿವೃದ್ದಿ ಪಡಿಸೋಣ ಎಂದು ಕೇಳಿದಾಗ ಕ.ಗ.ಪ. ಇದರ ಬಗ್ಗೆ ಪ್ರತಿಕ್ರಿಯಿಸಲಿಲ್ಲ ಆಗ ಅವರು ಮಾಡಿದ ಕೆಲಸ ಗೊತ್ತಾಯಿತು  ಅದು ಅವರು ಮಾಡಿದ್ದಲ್ಲ ಅವರು ಕದ್ದಿದ್ದಾರೆ ಅಂತ ಹೀಗೆ ಕದ್ದಿರುವುದು ಆಕೃತಿ ಆನಂದ್ ಅವರಿಂದ ಆನಂದ್ ಅವರು ಬರಹದಿಂದ ಬಳಸಿಕೊಂಡಿದ್ದರು ಆದ್ದರಿಂದ ಅವರು ಓಪನ್ ಸೋರ್ಸ್ಗೆ ಇಡಲು ಪ್ರಯತ್ನಿಸುತ್ತಿಲ್ಲ.

ಇಂದಿನ ಸ್ಥಿತಿಏನಾಗಿದೆ ಅಂದರೆ ನಿಧಾನವಾಗಿ ನುಡಿ ಬಳಕೆಯಾಗುತ್ತಿದ್ದೆ, ಗೂಗಲ್ ನಲ್ಲಿ ಅನೇಕ ವರುಷಗಳ ಒತ್ತಡದಿಂದ ಕನ್ನಡವನ್ನು ಸೇರಿಸಲಾಯಿತು.
ಈಗ ಕರ್ನಾಟಕ ಸರ್ಕಾರ ಇದಕ್ಕೆ ಅಭಿವೃದ್ಧಿಗೆ ಸಮಿತಿಯನ್ನು ರಚಿಸಿದೆ ಇದರ ಬಗ್ಗೆ ಸಾಮಾನ್ಯ ಬಳಕೆದಾರರು, ತಂತ್ರಜ್ನರನ್ನ ಒಳಗೊಂಡಿತ್ತು. ಚಿದಾನಂದ ಗೌಡರ ಅಧ್ಯಕ್ಷತೆಯಲ್ಲಿ ಸಮಿತಿಯನ್ನ ರಚನೆ ಮಾಡಿದರು ಆದರೆ ಅದರಿಂದ ಯಾವುದೇ ಸಫಲತೆ ಕಂಡಿಲ್ಲ.

ಈ-ಆಡಳಿತ ಬಗ್ಗೆ ಎಸ್.ಎಂ.ಕೃಷ್ಣ ಜಾರಿಮಾಡಿದರು ಯಾವುದೇ ಸಫಲತೆ ಕಾಣಲಿಲ್ಲ. ಈ-ಆಡಳಿತದಿಂದ ಜಾರಿಯಾದ ಹಿನ್ನೆಲೆಯಲ್ಲಿ ಅದನ್ನು ತಂತ್ರಜ್ಞಾನದ ಮುಖೇನ ಹೊಸದನ್ನು ಏನನ್ನಾದರು ಬಳಸಬಹುದಾಗಿತ್ತು.

ರಾಜ್ಯದಲ್ಲಿ ಈ-ಆಡಳಿತ ಸಂಪೂರ್ಣ ಫೇಲ್ ಆಗಿದೆ, ಈಗಿನ ಸರ್ಕಾರ ಅದಕ್ಕೆ ಇದರ ಬಗ್ಗೆ ಏನು ಗೊತ್ತಿಲ್ಲ ಬರಿ ತಮ್ಮ ಪ್ರತಿಷ್ಠೆಯ ಸಾರುವುದಕ್ಕೆ ಸಂಕಲ್ಪವನ್ನು ಮಾಡುವುದರಲ್ಲೇ ಮಗ್ನವಾಗಿದೆ ಎಂದು ಅವರು ಕಿಡಿ ಕಾರಿದರು.

ಹೀಗೆ ಕನ್ನಡ ತಂತ್ರಾಂಶ ಇನ್ನು ಬೆಳೆಯ ಬೇಕಾಗಿದೆ ಇನ್ನು ಕೆಲವು ತಂತ್ರಾಂಶಗಳು ಕನ್ನಡಕ್ಕೆ ಬೇಕಾಗಿದೆ, ಹೊಸ ಹೊಸ ಸಾಫ್ಟ್ ವೇರ್ ಬಗ್ಗೆ ಸರ್ಕಾರ ಆಸಕ್ತಿ ವಹಿಸಿ ಅದನ್ನು ಅಭಿವೃದ್ದಿ ಪಡಿಸಬೇಕಾಗಿತ್ತು ಆದರೆ ಅವರು ಮಾಡಲಿಲ್ಲ.

ಖಾಸಗಿ ಸಂಸ್ಥೆಗಳು ಕೆಲವರು ಹೆಚ್ಚಿನ ಸ್ವಾರ್ಥ ಇಲ್ಲದೆ ಮಾಡುತ್ತಿದ್ದಾರೆ ಸರ್ಕಾರ ಇಂತವರನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ ಅವರು ಸರ್ಕಾರದ ಗಮನ ಸೆಳೆಯುವ ಸ್ಥಿತಿಯಲ್ಲಿ ನಾವು ಇಲ್ಲ ಆದರೆ ನಾವು ಅದರ ಬಗ್ಗೆ ಆಸಕ್ತಿ ಹೊಂದಿದ್ದೇವೆ ಎಂದು ಹೇಳಿ ತಮ್ಮ ಮಾತನ್ನು ಮುಗಿಸಿದರು.
 

ಈ-ಕವಿ ರಾಜ್ಯಾಧ್ಯಕ್ಷ  ಸಿ.ವಿ.ಕಿರಣ್ ಅವರು ಮಾತನಾಡಿ , ತಂತ್ರಾಂಶದ ಬಗ್ಗೆ ಮಾತನಾಡುತ್ತಾ ಮೈಕ್ರೋ ಸಾಫ್ಟ್ ಮತ್ತು ಲೆನೆಕ್ಸ್ ತಂತ್ರಾಂಶದ ಬಗ್ಗೆ ತಿಳಿಸಿದರು, ಕೆಲವು ಸಾಫ್ಟ್ ವೇರ್ ಕಂಪೆನಿಗಳು ತಮ್ಮ ಏಕಸ್ವಾಮ್ಯತೆಯನ್ನು ಸ್ಥಾಪಿಸುತ್ತಾ ಹೋಗಿವೆ ತಮ್ಮ ಲಾಭದ ದೃಷ್ಟಿಯಿಂದ ಎಂದು ಹೇಳಿದರು. ಕನ್ನಡ ತಂತ್ರಾಂಶದಲ್ಲಿ ಆದಂತಹ ಲೋಪದೋಷಗಳ ಬಗ್ಗೆ ತಿಳಿಸುತ್ತ ಕೆಲವರು ಕನ್ನಡ ತಂತ್ರಾಂಶವನ್ನು ಕದ್ದಿರುವ ಕುರಿತು ವಿವರಿಸಿದರು.
ಹಿಂದೆ ೨೪ ಜನ ತಂತ್ರಜ್ಞರಿದ್ದರು ಆದರೆ ಇಂದು ಒಬ್ಬರೇ ತಂತ್ರಜ್ಞರಿದ್ದಾರೆ ಅವರು ಹೇಳಿದ ಹಾಗೆ ಮತ್ತು ಅವರು ತಯಾರಿಸಿದ ತಂತ್ರಾಂಶವನ್ನೇ ಬಳಸುವ ಸ್ಥಿತಿ ಬಂದಿದೆ ಆದರೆ ಅವುಗಳಲ್ಲಿ ನಾವು ಹೆಚ್ಚಾಗಿ ಕಂಗ್ಲಿಷನ್ನೇ ಬಳಸುತ್ತಾ ಬರಲಾಗಿದ್ದು ಇದರ ಬಗ್ಗೆ ಯಾವುದೇ ಅಭಿವೃದ್ದಿ ಪಡಿಸದೇ ಹೋದರೆ ಅದನ್ನೇ ಮುಂದಕ್ಕೂ ಬಳಸುವ ಪರಿಸ್ಥಿತಿ ಬರುತ್ತದೆ ಆದ್ದರಿಂದ ನಾವು ಇದನ್ನು ಬದಲಿಸಬೇಕಾಗಿದೆ ಎಂದು ಅವರು ತಿಳಿಸಿದರು.
 
ಇದೇ ಸಂಧರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಒಕ್ಕೂಟದ ಅಧ್ಯಕ್ಷರಾದ ಕೆ.ಪ್ರಭಾಕರ ರೆಡ್ಡಿ ಮಾತನಾಡಿ, ಸರ್ಕಾರದ ಕಾರ್ಯದರ್ಶಿ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿ  ರಾಜ್ಯದಲ್ಲಿ ಯಾವ ಕನ್ನಡ ಕಾರ್ಯಕ್ರಮಗಳಲ್ಲೂ ಕನ್ನಡದ ಭಾವುಟವನ್ನು ಹಾರಿಸಬಾರದೆಂದು ಹೇಳಿರುವ ಕ್ರಮವನ್ನು ತಮ್ಮ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ, ಈ ಸುತ್ತೋಲೆಯನ್ನು ಸರ್ಕಾರವು ಹಿಂದಕ್ಕೆ ಪಡೆಯದೆ ಹೋದರೆ ಮತ್ತೆ ಗೋಕಾಕ್ ಮಾದರಿ ರಾಜ್ಯಾದ್ಯಂತ ತೀವ್ರ ಚಳವಳಿ ನಡೆಸುವುದಾಗಿ ಎಚ್ಚರಿಕೆ ಕೊಟ್ಟರು.
ಮುಖ್ಯಮಂತ್ರಿಗಳನ್ನು  ಇನ್ನೆರೆಡು ದಿನಗಳಲ್ಲಿ ಭೇಟಿ ಮಾಡಿ ತಮ್ಮ ಒಕ್ಕೂಟದ ಕೆಲವು ಬೇಡಿಕೆಗಳ ಜೊತೆಗೆ ಕನ್ನಡ ತಂತ್ರಾಂಶದ ಬಗ್ಗೆ ಆಗಿರುವ ಲೋಪ-ದೋಷಗಳನ್ನು ಸರಿಪಡಿಸಿ  ಅಭಿವೃದ್ದಿ ಪಡಿಸಬೇಕೆಂದು ಒತ್ತಡವನ್ನು ಏರುತ್ತೆವೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ  ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ದ ಕಾರ್ಯಾಧ್ಯಕ್ಷರು ಸೇರಿದಂತೆ ನೂರಾರು ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: